🚚 Free Shipping on Regular Products · PVC Freight Extra📞 +91 97410 45275🔒 100% Secure Payments⭐ Trusted by 2000+ Customers 🚚 Free Shipping on Regular Products · PVC Freight Extra📞 +91 97410 45275🔒 100% Secure Payments⭐ Trusted by 2000+ Customers
ಮುಖಪುಟಹೆಸರು ಫಲಕಗಳು › ಕನ್ನಡ ನೇಮ್ ಪ್ಲೇಟ್
Kannada Name Plate for Home · ₹1,499 ರಿಂದ

ಕನ್ನಡ ಹೆಸರು ಫಲಕ — ನಿಮ್ಮ ಮನೆಯ ಹೆಸರು ಕನ್ನಡದಲ್ಲಿ ಹೆಮ್ಮೆಯಿಂದ

ಮನೆ, ಅಪಾರ್ಟ್‌ಮೆಂಟ್, ವಿಲ್ಲಾ, ಗೇಟ್ ಮತ್ತು ಕಚೇರಿಗೆ ಕಸ್ಟಮ್ ಕನ್ನಡ ನೇಮ್ ಪ್ಲೇಟ್ ಮತ್ತು ಹೌಸ್ ನೇಮ್ ಬೋರ್ಡ್. ಅಕ್ರಿಲಿಕ್, ಮಿರರ್ ಗೋಲ್ಡ್ ಮತ್ತು ವಾಲ್ನಟ್ ACP ಆಯ್ಕೆಗಳಲ್ಲಿ ನಿಮ್ಮ ಹೆಸರು, ಮನೆ ಸಂಖ್ಯೆ ಹಾಗೂ ದೇವರ ಚಿಹ್ನೆಯನ್ನು ಸೇರಿಸಿಕೊಳ್ಳಿ. ಆರ್ಡರ್ ಮಾಡುವ ಮೊದಲು ಉಚಿತ ಡಿಸೈನ್ ಮಾಕ್‌ಅಪ್.

✓ ಉಚಿತ ಡಿಸೈನ್ ಮಾಕ್‌ಅಪ್✓ 10 ಕನ್ನಡ ಫಾಂಟ್✓ ಭಾರತದೆಲ್ಲೆಡೆ ಉಚಿತ ವಿತರಣೆ✓ ಉಜಿರೆಯಲ್ಲಿ ತಯಾರಿಕೆ
ಕನ್ನಡ ಮಿರರ್ ಗೋಲ್ಡ್ ಅಕ್ರಿಲಿಕ್ ಮನೆ ಹೆಸರು ಫಲಕ ಹೊರಗೋಡೆಯಲ್ಲಿ ಅಳವಡಿಸಿದ ನೋಟ
ಕನ್ನಡ ನಾಮಫಲಕಗಳು

ಮನೆ ಬಾಗಿಲಿಗೆ ಸಂಸ್ಕೃತಿ ಮತ್ತು ಆಧುನಿಕ ವಿನ್ಯಾಸದ ಸಂಯೋಜನೆ

ಕನ್ನಡದಲ್ಲಿ ಮನೆಯ ಹೆಸರು ಫಲಕವು ವಿಳಾಸ ತೋರಿಸುವ ಫಲಕ ಮಾತ್ರವಲ್ಲ—ಅದು ಮನೆಯ ಗುರುತು. Bright N Wall® ನಲ್ಲಿ ಅಕ್ಷರಗಳ ಸ್ಪಷ್ಟತೆ, ಸರಿಯಾದ ಕನ್ನಡ ಕಾಗುಣಿತ, ಸೂಕ್ತ ಅಳತೆ ಮತ್ತು ಬಾಗಿಲಿನ ಬಣ್ಣಕ್ಕೆ ಹೊಂದುವ ಫಿನಿಷ್‌ನ್ನು ಗಮನಿಸಿ ಪ್ರತಿಯೊಂದು ಫಲಕವನ್ನೂ ಆರ್ಡರ್‌ಗೆ ತಕ್ಕಂತೆ ತಯಾರಿಸುತ್ತೇವೆ.

14 ಸಿದ್ಧ ವಿನ್ಯಾಸಗಳು

ನಿಮ್ಮ ಮನೆಗೆ ಹೊಂದುವ ಕನ್ನಡ ನೇಮ್ ಪ್ಲೇಟ್ ಆಯ್ಕೆಮಾಡಿ

ಕೆಳಗಿನ ಪ್ರತಿಯೊಂದು ಮಾದರಿಯಲ್ಲೂ ಹೆಸರು, ಮನೆ ಸಂಖ್ಯೆ, ಅಕ್ಷರ ಶೈಲಿ ಮತ್ತು ಚಿಹ್ನೆಯನ್ನು ಬದಲಾಯಿಸಬಹುದು. ಬೆಲೆ ₹1,499 ರಿಂದ ಆರಂಭ. ಆರ್ಡರ್ ಮಾಡುವ ಮೊದಲು ಉಚಿತ ಡಿಸೈನ್ ಮಾಕ್‌ಅಪ್ ಪಡೆಯಿರಿ.

ರಾಘವೇಂದ್ರ ಸ್ವಾಮಿ ಬ್ರಷ್ಡ್ ಗોಲ್ಡ್ ಅಕ್ರಿಲಿಕ್ ಕಸ್ಟಮ್ ಮನೆ ಹೆಸರು ಫಲಕ 12 × 18 ಇಂಚು
ರಾಘವೇಂದ್ರ ಸ್ವಾಮಿ ಬ್ರಷ್ಡ್ ಅಕ್ರಿಲಿಕ್ ಫಲಕ
₹1,550 ರಿಂದ
ವಿವರ ನೋಡಿ
ಕನ್ನಡ ಫಾರ್ಮ್‌ಹೌಸ್ ಹ್ಯಾಂಗಿಂಗ್ ವಾಲ್ನಟ್ ACP ಹೆಸರು ಬೋರ್ಡ್
ಫಾರ್ಮ್‌ಹೌಸ್ ಹ್ಯಾಂಗಿಂಗ್ ನೇಮ್ ಬೋರ್ಡ್
₹3,300
ವಿವರ ನೋಡಿ
ಶ್ರೀ ಗುರು ರಾಘವೇಂದ್ರ ಕನ್ನಡ ಅಕ್ರಿಲಿಕ್ ಹೆಸರು ಫಲಕ ಮ್ಯಾಟ್ ಕಪ್ಪು ಮತ್ತು ಗોಲ್ಡ್ ಮಿರರ್
ಶ್ರೀ ಗುರು ರಾಘವೇಂದ್ರ ಪ್ರೀಮಿಯಂ ಕನ್ನಡ ಫಲಕ
₹4,700 ರಿಂದ
ವಿವರ ನೋಡಿ
ಹೆಸರು ಸಲಹೆಗಳು

ಕನ್ನಡ ಮನೆ ಹೆಸರುಗಳು — ಜನಪ್ರಿಯ ಆಯ್ಕೆಗಳು

ಮನೆಗೆ ಯಾವ ಹೆಸರು ಇಡಬೇಕೆಂದು ನಿರ್ಧರಿಸಿಲ್ಲವೇ? ಕರ್ನಾಟಕದ ಮನೆಗಳಲ್ಲಿ ಹೆಚ್ಚು ಬಳಸುವ ಕನ್ನಡ ಹೆಸರುಗಳು ಇಲ್ಲಿವೆ. ರಾಘವೇಂದ್ರ ಸ್ವಾಮಿ, ಗಣೇಶ, ವೆಂಕಟೇಶ ಮತ್ತು ಲಕ್ಷ್ಮಿ ಹೆಸರುಗಳು ಅತ್ಯಂತ ಜನಪ್ರಿಯ. ನಿಮಗೆ ಇಷ್ಟವಾದ ಹೆಸರನ್ನು WhatsApp‌ನಲ್ಲಿ ಕಳುಹಿಸಿದರೆ ಉಚಿತ ಮಾಕ್‌ಅಪ್ ತಯಾರಿಸಿ ಕೊಡುತ್ತೇವೆ.

ಶ್ರೀ ನಿಲಯSRI NILAYA
ಗುರು ಕೃಪಾGURU KRUPA
ಶ್ರೀ ರಾಘವೇಂದ್ರ ಕೃಪಾRAGHAVENDRA KRUPA
ಸೌಭಾಗ್ಯSAUBHAGYA
ಶ್ರೀನಿಧಿSRINIDHI
ಅನುಗ್ರಹANUGRAHA
ಆಶೀರ್ವಾದASHIRVAD
ಸೂರ್ಯ ನಿಲಯSURYA NILAYA
ವೆಂಕಟೇಶ ಕೃಪಾVENKATESHA KRUPA
ಮಂಗಳ ನಿಲಯMANGALA NILAYA
ಶ್ರೀ ಸಾಯಿ ನಿಲಯSRI SAI NILAYA
ಅಮೃತ ವರ್ಷಿಣಿAMRUTHA VARSHINI

ಹೆಚ್ಚಿನ ವಿನ್ಯಾಸ ಕಲ್ಪನೆಗಳಿಗಾಗಿ ಕನ್ನಡ ನೇಮ್ ಪ್ಲೇಟ್ ಡಿಸೈನ್ ಐಡಿಯಾಗಳು ಪುಟವನ್ನೂ ನೋಡಿ. ವಾಸ್ತು ಪ್ರಕಾರ ದಿಕ್ಕು ಮತ್ತು ಬಣ್ಣ ಆಯ್ಕೆಗೆ ವಾಸ್ತು ಮಾರ್ಗದರ್ಶಿ ಓದಿ.

ಏಕೆ ಕನ್ನಡ?

ಕನ್ನಡ ಹೆಸರು ಫಲಕದ ವಿಶೇಷತೆಗಳು

ಮಾತೃಭಾಷೆಯ ಹೆಮ್ಮೆ

ಮನೆಯ ಪ್ರವೇಶದಲ್ಲೇ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯ ಆತ್ಮೀಯ ಗುರುತು ಮೂಡುತ್ತದೆ.

Aa

ಕನ್ನಡ + English

ಕನ್ನಡ ಹೆಸರು ಜೊತೆಗೆ ಇಂಗ್ಲಿಷ್ surname ಅಥವಾ door number ಸೇರಿಸಿದ bilingual layout ಪಡೆಯಬಹುದು.

ಪ್ರೀಮಿಯಂ ಫಿನಿಷ್

ಮಿರರ್ ಗೋಲ್ಡ್, ಬ್ರಷ್ಡ್ ಮೆಟಲ್, ಗ್ಲಾಸಿ ಕಪ್ಪು, ಬಿಳಿ ಮತ್ತು ವುಡ್-ಗ್ರೇನ್ ಆಯ್ಕೆಗಳು.

ಪ್ರತಿ ಪ್ರವೇಶಕ್ಕೆ ಸೂಕ್ತ

ಅಪಾರ್ಟ್‌ಮೆಂಟ್ ಬಾಗಿಲು, ವಿಲ್ಲಾ, ಗೇಟ್, ಕಚೇರಿ, ಅಂಗಡಿ ಮತ್ತು ಹೌಸ್‌ವಾರ್ಮಿಂಗ್ ಉಡುಗೊರೆಗೆ.

ಮೊದಲು ಪ್ರಿವ್ಯೂ

ತಯಾರಿಕೆ ಆರಂಭಿಸುವ ಮೊದಲು ಹೆಸರು, ಸಂಖ್ಯೆ, ಕಾಗುಣಿತ ಮತ್ತು ವಿನ್ಯಾಸದ ಡಿಜಿಟಲ್ ಪ್ರಿವ್ಯೂ ನೀಡಲಾಗುತ್ತದೆ.

ಭಾರತದೆಲ್ಲೆಡೆ ವಿತರಣೆ

ಉಜಿರೆಯಲ್ಲಿ ನಿಖರವಾಗಿ ತಯಾರಿಸಿ, ಸುರಕ್ಷಿತ ಪ್ಯಾಕಿಂಗ್‌ನೊಂದಿಗೆ ಭಾರತದೆಲ್ಲೆಡೆ ಕಳುಹಿಸುತ್ತೇವೆ.

ನೇಮ್ ಪ್ಲೇಟ್ vs ನೇಮ್ ಬೋರ್ಡ್

ಕನ್ನಡ ಹೌಸ್ ನೇಮ್ ಬೋರ್ಡ್ ಬೇಕೇ ಅಥವಾ ಡೋರ್ ನೇಮ್ ಪ್ಲೇಟ್?

ಎರಡರ ನಡುವಿನ ವ್ಯತ್ಯಾಸ ಸ್ಥಳ ಮತ್ತು ಗಾತ್ರದಲ್ಲಿದೆ. ಡೋರ್ ನೇಮ್ ಪ್ಲೇಟ್ ಸಾಮಾನ್ಯವಾಗಿ 6×12 ರಿಂದ 8×16 ಇಂಚು — ಅಪಾರ್ಟ್‌ಮೆಂಟ್ ಬಾಗಿಲು ಅಥವಾ ಬಾಗಿಲ ಪಕ್ಕದ ಗೋಡೆಗೆ. ಹೌಸ್ ನೇಮ್ ಬೋರ್ಡ್ ದೊಡ್ಡದು — 12×20 ಇಂಚು ಅಥವಾ ಅದಕ್ಕಿಂತ ಹೆಚ್ಚು, ಕಾಂಪೌಂಡ್ ಗೋಡೆ, ಗೇಟ್ ಅಥವಾ ವಿಲ್ಲಾ ಪ್ರವೇಶಕ್ಕೆ. ಬೋರ್ಡ್‌ಗೆ ದೂರದಿಂದ ಓದುವಂತೆ ದೊಡ್ಡ ಅಕ್ಷರ ಮತ್ತು ಹೊರಾಂಗಣಕ್ಕೆ ಸೂಕ್ತವಾದ ACP ಬೇಸ್ ಬಳಸುತ್ತೇವೆ. ನಿಮ್ಮ ಜಾಗದ ಚಿತ್ರ ಕಳುಹಿಸಿದರೆ ಯಾವುದು ಸೂಕ್ತ ಎಂದು ಸಲಹೆ ನೀಡುತ್ತೇವೆ.

ಕನ್ನಡ ಹೌಸ್ ನೇಮ್ ಬೋರ್ಡ್ ಮನೆಯ ಪ್ರವೇಶ ಗೋಡೆಯಲ್ಲಿ ಅಳವಡಿಸಿದ ನೋಟ
ವಸ್ತು ಆಯ್ಕೆ

ಅಕ್ರಿಲಿಕ್, ACP ಅಥವಾ ವುಡ್-ಫಿನಿಷ್—ಯಾವುದು ಸೂಕ್ತ?

ಫಲಕವನ್ನು ಎಲ್ಲಿ ಅಳವಡಿಸುತ್ತೀರಿ ಎಂಬುದರ ಆಧಾರದ ಮೇಲೆ ವಸ್ತು ಆಯ್ಕೆಮಾಡಿ. ಒಳಾಂಗಣ ಅಥವಾ ಮಳೆಯ ನೇರ ಸಂಪರ್ಕವಿಲ್ಲದ ಬಾಗಿಲಿಗೆ ಲೇಯರ್ಡ್ ಅಕ್ರಿಲಿಕ್ ಅತ್ಯಂತ ಆಕರ್ಷಕ. ಗೇಟ್ ಮತ್ತು ಹೊರಾಂಗಣ ಬಳಕೆಗೆ ACP ಉತ್ತಮ ಆಯ್ಕೆ. ಅನುಮಾನವಿದ್ದರೆ ನಿಮ್ಮ ಬಾಗಿಲಿನ ಚಿತ್ರವನ್ನು WhatsApp‌ನಲ್ಲಿ ಕಳುಹಿಸಿ.

ಅಕ್ರಿಲಿಕ್ಮಾಡರ್ನ್ ಲುಕ್, ಕಪ್ಪು/ಬಿಳಿ ಬೇಸ್, ಮಿರರ್ ಗೋಲ್ಡ್ ಅಥವಾ ಸಿಲ್ವರ್ ಅಕ್ಷರಗಳು; ಬಾಗಿಲು ಮತ್ತು sheltered entrance‌ಗೆ ಸೂಕ್ತ.
ವಾಲ್ನಟ್ ACPವುಡ್-ಗ್ರೇನ್ ಲುಕ್, ಹಗುರ ಮತ್ತು ದೀರ್ಘಕಾಲಿಕ; ದೊಡ್ಡ ಮನೆ ಫಲಕ ಮತ್ತು ಹೊರಾಂಗಣ ಪ್ರವೇಶಕ್ಕೆ ಉತ್ತಮ.
ಮಿರರ್ ಅಕ್ರಿಲಿಕ್ಚಿನ್ನ ಅಥವಾ ಬೆಳ್ಳಿ ಪ್ರತಿಫಲನದ ಪ್ರೀಮಿಯಂ raised letters; ಬೆಳಕಿನ ಪ್ರಕಾರ reflection ಬದಲಾಗುತ್ತದೆ.
ಅಳತೆ ಮಾರ್ಗದರ್ಶಿ

ಮನೆಯ ಹೆಸರು ಫಲಕಕ್ಕೆ ಸರಿಯಾದ ಅಳತೆ

ಮೊದಲು ಲಭ್ಯವಿರುವ ಗೋಡೆ ಅಥವಾ ಬಾಗಿಲಿನ ಜಾಗವನ್ನು ಅಳೆಯಿರಿ. ಹೆಸರು ಹೆಚ್ಚು ಉದ್ದವಾಗಿದ್ದರೆ ಅಥವಾ ಎರಡು ಭಾಷೆ ಬೇಕಿದ್ದರೆ ದೊಡ್ಡ ಅಳತೆ ಆಯ್ಕೆಮಾಡಿ.

6 × 12ಅಪಾರ್ಟ್‌ಮೆಂಟ್ ಬಾಗಿಲು ಮತ್ತು ಒಂದು ಹೆಸರು
8 × 16ಕುಟುಂಬ ಹೆಸರು + ಮನೆ ಸಂಖ್ಯೆ
10 × 16ಕನ್ನಡ + English bilingual layout
12 × 20ವಿಲ್ಲಾ, ಗೇಟ್ ಮತ್ತು ಹೌಸ್ ನೇಮ್ ಬೋರ್ಡ್

ಕಸ್ಟಮ್ ಅಳತೆ ಬೇಕಿದ್ದರೆ ಉದ್ದ × ಎತ್ತರವನ್ನು ಇಂಚುಗಳಲ್ಲಿ ಕಳುಹಿಸಿ. ವಿನ್ಯಾಸಕ್ಕೆ ಅನುಗುಣವಾಗಿ ಅಂತಿಮ ಅಳತೆ ಸಲಹೆ ನೀಡುತ್ತೇವೆ.

10 ಕನ್ನಡ ಫಾಂಟ್ ಕುಟುಂಬಗಳು

ಪ್ರತಿಯೊಂದೂ ಬೇರೆಯದೇ ಶೈಲಿ — ನಿಮ್ಮ ಹೆಸರಿಗೆ ಹೊಂದುವುದನ್ನು ಆರಿಸಿ

ಕೆಳಗಿನ ಪ್ರತಿ ಫಾಂಟ್ ಬೇರೆ ಬೇರೆ ಕುಟುಂಬದಿಂದ ಬಂದದ್ದು — ಒಂದೇ ಫಾಂಟಿನ ದಪ್ಪ ಬದಲಾವಣೆ ಅಲ್ಲ. ಪ್ರತಿಯೊಂದರಲ್ಲೂ ದೊಡ್ಡದಾಗಿ ತೋರಿಸಿರುವ ಅಕ್ಷರವನ್ನು ಹೋಲಿಸಿ ನೋಡಿ, ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಉಚಿತ ಮಾಕ್‌ಅಪ್‌ನಲ್ಲಿ ನಿಮ್ಮ ಹೆಸರಿಗೆ 2–3 ಸೂಕ್ತ ಫಾಂಟ್ ತೋರಿಸುತ್ತೇವೆ; ಲೇಸರ್ ಕಟ್‌ಗೆ ಸುರಕ್ಷಿತವಾದ ದಪ್ಪ ಮತ್ತು ಅಕ್ಷರ ಅಂತರವನ್ನು ಅಂತಿಮ ವಿನ್ಯಾಸದಲ್ಲಿ ಸರಿಹೊಂದಿಸುತ್ತೇವೆ.

ಸೂರ್ಯ ನಿಲಯ
NOTO SANS KANNADAಸರಳ · ಎಲ್ಲದಕ್ಕೂ ಸೂಕ್ತ
ಸೂರ್ಯ ನಿಲಯ
NOTO SERIF KANNADAಸಾಂಪ್ರದಾಯಿಕ · ಗಂಭೀರ
ಸೂರ್ಯ ನಿಲಯ
ANEK KANNADAಆಧುನಿಕ · ಸ್ಪಷ್ಟ
ಸೂರ್ಯ ನಿಲಯ
BALOO TAMMA 2ಮೃದು · ದುಂಡಾದ ಅಂಚು
ಸೂರ್ಯ ನಿಲಯ
HUBBALLIತೆಳು · ಮಿನಿಮಲ್
ಸೂರ್ಯ ನಿಲಯ
HIND MYSURUದೂರದಿಂದಲೂ ಓದಬಹುದು
ಸೂರ್ಯ ನಿಲಯ
TIRO KANNADAಪಾರಂಪರಿಕ · ಕೈಬರಹ ಶೈಲಿ
ಸೂರ್ಯ ನಿಲಯ
AKAYA KANADAKAಕಲಾತ್ಮಕ · ವಿಶಿಷ್ಟ
ಸೂರ್ಯ ನಿಲಯ
BENNEಶಾಸ್ತ್ರೀಯ · ದೇವಸ್ಥಾನ ಶೈಲಿ
ಸೂರ್ಯ ನಿಲಯ
PADYAKKE EXPANDEDಅಗಲ · ಅಗಲವಾದ ಫಲಕಕ್ಕೆ
ಸೂರ್ಯ ನಿಲಯ
NOTO SANS · EXTRA BOLDದಪ್ಪ · ದೊಡ್ಡ ಬೋರ್ಡ್‌ಗೆ
ಸೂರ್ಯ ನಿಲಯ
TIRO KANNADA · ITALICಓರೆ · ಶೈಲಿಯುತ

ಫಾಂಟ್ ಹೆಸರು ತಿಳಿಯದಿದ್ದರೂ ಸಮಸ್ಯೆ ಇಲ್ಲ—ನಿಮಗೆ ಇಷ್ಟವಾದ “ಸರಳ / ದಪ್ಪ / ಸಾಂಪ್ರದಾಯಿಕ / ಸ್ಟೈಲಿಷ್” ಶೈಲಿಯನ್ನು WhatsApp‌ನಲ್ಲಿ ತಿಳಿಸಿದರೆ ಸಾಕು.

ಆರ್ಡರ್ ಪ್ರಕ್ರಿಯೆ

ನಾಲ್ಕು ಸರಳ ಹಂತಗಳಲ್ಲಿ ನಿಮ್ಮ ಕನ್ನಡ ನೇಮ್ ಪ್ಲೇಟ್

ಮಾದರಿ ಆಯ್ಕೆ

ಮೇಲಿನ 14 ವಿನ್ಯಾಸಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನಿಮ್ಮ reference image ಕಳುಹಿಸಿ.

ವಿವರ ಕಳುಹಿಸಿ

ಕನ್ನಡ ಹೆಸರು, ಮನೆ ಸಂಖ್ಯೆ, ಅಳತೆ, ಬಣ್ಣ ಮತ್ತು ಬೇಕಾದ ಚಿಹ್ನೆಯನ್ನು ತಿಳಿಸಿ.

ಉಚಿತ ಡಿಸೈನ್ ಮಾಕ್‌ಅಪ್

ಕಾಗುಣಿತ, ಫಾಂಟ್, ವಿನ್ಯಾಸ ಮತ್ತು ಒಟ್ಟು ಅಳತೆಯನ್ನು ಉಚಿತ ಮಾಕ್‌ಅಪ್‌ನಲ್ಲಿ ಪರಿಶೀಲಿಸಿ.

ತಯಾರಿಕೆ ಮತ್ತು ವಿತರಣೆ

ನಿಮ್ಮ ಅನುಮೋದನೆಯ ನಂತರ ತಯಾರಿಸಿ ಸುರಕ್ಷಿತವಾಗಿ ಪ್ಯಾಕ್ ಮಾಡಿ ಕಳುಹಿಸುತ್ತೇವೆ.

ಅಳವಡಿಕೆ ಮತ್ತು ಕಾಳಜಿ

ಫಲಕವನ್ನು ವರ್ಷಗಟ್ಟಲೆ ಹೊಸದಾಗಿ ಉಳಿಸಿಕೊಳ್ಳಲು

ಮೃದುವಾದ ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ. ಮಿರರ್ ಅಕ್ರಿಲಿಕ್ ಮೇಲೆ abrasive cleaner ಅಥವಾ ತೀವ್ರ ರಾಸಾಯನಿಕ ಬಳಸಬೇಡಿ. 3M tape ಆಯ್ಕೆ smooth, clean ಮತ್ತು dry surface‌ಗೆ ಸೂಕ್ತ; rough wall, gate ಅಥವಾ ದೊಡ್ಡ ಫಲಕಗಳಿಗೆ stud/screw mounting ಉತ್ತಮ. ಹೊರಾಂಗಣ ಫಲಕಗಳಿಗೆ ಸ್ಟೇನ್‌ಲೆಸ್ ಸ್ಟೀಲ್ ಸ್ಪೇಸರ್ ಸ್ಟಡ್ ಬಳಸುತ್ತೇವೆ, ಇದರಿಂದ ಫಲಕದ ಹಿಂದೆ ನೀರು ನಿಲ್ಲದೆ ಹರಿದುಹೋಗುತ್ತದೆ.

ಕರ್ನಾಟಕದಾದ್ಯಂತ ಸೇವೆ

ಸ್ಥಳೀಯ ವಿನ್ಯಾಸ, ಪ್ಯಾನ್-ಇಂಡಿಯಾ ವಿತರಣೆ

ನಾವು ಉಜಿರೆ, ದಕ್ಷಿಣ ಕನ್ನಡದಲ್ಲಿ ತಯಾರಿಸುತ್ತೇವೆ. ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಬೆಳ್ತಂಗಡಿ ಮತ್ತು ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಕಸ್ಟಮ್ ಕನ್ನಡ ಹೆಸರು ಫಲಕಗಳನ್ನು ಕಳುಹಿಸುತ್ತೇವೆ.

ಇತರ ಭಾರತೀಯ ಭಾಷೆಗಳಲ್ಲಿ ಹೆಸರು ಫಲಕ

ಕನ್ನಡ ಮಾತ್ರವಲ್ಲ — ಇತರ ಭಾರತೀಯ ಭಾಷೆಗಳಲ್ಲೂ ಫಲಕ ತಯಾರಿಸುತ್ತೇವೆ. ಪ್ರತಿ ಭಾಷೆಗೂ ಆ ಲಿಪಿಗೆ ಸೂಕ್ತವಾದ ಪ್ರತ್ಯೇಕ ಫಾಂಟ್ ಕುಟುಂಬಗಳು ಮತ್ತು ವಿನ್ಯಾಸ ಆಯ್ಕೆಗಳಿವೆ.

ತಾಂತ್ರಿಕ ವಿವರ

ಕನ್ನಡ ಹೆಸರು ಫಲಕದ ಸ್ಪೆಸಿಫಿಕೇಶನ್

ಪ್ರತಿ ಫಲಕವೂ ಆರ್ಡರ್‌ಗೆ ತಕ್ಕಂತೆ ತಯಾರಾಗುತ್ತದೆ, ಆದ್ದರಿಂದ ಅಂತಿಮ ರಚನೆ ನೀವು ಆಯ್ಕೆ ಮಾಡುವ ವಿನ್ಯಾಸವನ್ನು ಅವಲಂಬಿಸಿದೆ. ಕೆಳಗಿನವು ನಾವು ಬಳಸುವ ಪ್ರಮಾಣಿತ ರಚನೆಗಳು.

ಬೇಸ್ ಪದರ3 ಮಿ.ಮೀ ಕಾಸ್ಟ್ ಅಕ್ರಿಲಿಕ್ — ಗ್ಲಾಸಿ ಕಪ್ಪು ಅಥವಾ ಬಿಳಿ; ಅಥವಾ ವಾಲ್ನಟ್-ಫಿನಿಷ್ ACP
ಉಬ್ಬು ಅಕ್ಷರ2 ಮಿ.ಮೀ ಮಿರರ್ ಗೋಲ್ಡ್ ಅಥವಾ ಮಿರರ್ ಸಿಲ್ವರ್ ಅಕ್ರಿಲಿಕ್
ಬ್ರಷ್ಡ್ ಮಾದರಿ1.5 ಮಿ.ಮೀ ಬ್ರಷ್ಡ್ ಗೋಲ್ಡ್ ಅಥವಾ ಸಿಲ್ವರ್ ಫೇಸ್, 3 ಮಿ.ಮೀ ಕಪ್ಪು ಅಕ್ರಿಲಿಕ್ ಬೇಸ್ ಮೇಲೆ
ತಯಾರಿಕೆCO₂ ಲೇಸರ್ ಕಟ್ ಮತ್ತು ಲೇಸರ್ ಎಂಗ್ರೇವಿಂಗ್; ಉಜಿರೆಯಲ್ಲಿ ಕೈಯಿಂದ ಫಿನಿಷ್
ಅಳತೆಗಳು6 × 12, 8 × 16, 10 × 16, 12 × 18, 12 × 20 ಇಂಚು; ಕಸ್ಟಮ್ ಅಳತೆಯೂ ಲಭ್ಯ
ಅಳವಡಿಕೆಸ್ಟೇನ್‌ಲೆಸ್ ಸ್ಟೀಲ್ ಸ್ಟಡ್-ಸ್ಟ್ಯಾಂಡ್‌ಆಫ್ — ಡ್ರಿಲ್ಲಿಂಗ್ ಟೆಂಪ್ಲೇಟ್ ಮತ್ತು ಹಾರ್ಡ್‌ವೇರ್ ಸಹಿತ; ಸಣ್ಣ ಒಳಾಂಗಣ ಫಲಕಕ್ಕೆ 3M ಟೇಪ್
ಫಾಂಟ್10 ಕನ್ನಡ ಫಾಂಟ್ ಕುಟುಂಬಗಳು; ದಪ್ಪ ಮತ್ತು ಅಗಲ ಬದಲಾವಣೆಯೊಂದಿಗೆ 20+ ಶೈಲಿ
ವಿತರಣಾ ಅವಧಿಡಿಸೈನ್ ಅನುಮೋದನೆಯ ನಂತರ ಸಾಮಾನ್ಯವಾಗಿ 5–8 ದಿನಗಳಲ್ಲಿ ತಲುಪುತ್ತದೆ
ಬೆಲೆ ಶ್ರೇಣಿ₹1,499 ರಿಂದ ₹3,790 — ಅಳತೆ, ವಸ್ತು ಮತ್ತು ಪದರಗಳ ಸಂಖ್ಯೆಯ ಆಧಾರದ ಮೇಲೆ
ಶಿಪ್ಪಿಂಗ್ಭಾರತದೆಲ್ಲೆಡೆ ಉಚಿತ ವಿತರಣೆ
ಅಳವಡಿಕೆ ಮಾರ್ಗದರ್ಶಿ

ಸ್ಟಡ್ ಮೌಂಟಿಂಗ್ — ನಾಲ್ಕು ಹಂತಗಳಲ್ಲಿ

ಹೊರಾಂಗಣ ಗೋಡೆ, ಗೇಟ್, ಕಾಂಪೌಂಡ್ ಗೋಡೆ ಮತ್ತು 10 ಇಂಚಿಗಿಂತ ಅಗಲವಾದ ಎಲ್ಲ ಫಲಕಗಳಿಗೆ ಇದೇ ವಿಧಾನ. ಡ್ರಿಲ್ಲಿಂಗ್ ಟೆಂಪ್ಲೇಟ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಹಾರ್ಡ್‌ವೇರ್ ಫಲಕದ ಜೊತೆಗೇ ಬರುತ್ತದೆ.

ಗುರುತು ಮಾಡಿ

ಟೆಂಪ್ಲೇಟ್ ಅನ್ನು ಗೋಡೆಗೆ ಸಮತಟ್ಟಾಗಿ ಹಿಡಿದು ಲೆವೆಲ್ ಪರಿಶೀಲಿಸಿ. ನೆಲದಿಂದ ಸುಮಾರು 5 ಅಡಿ ಎತ್ತರ — ಕಣ್ಣಿನ ಮಟ್ಟ — ಪ್ರವೇಶದಲ್ಲಿ ಉತ್ತಮವಾಗಿ ಕಾಣುತ್ತದೆ.

ಡ್ರಿಲ್ ಮಾಡಿ

ಗುರುತಿಸಿದ ಪ್ರತಿ ಸ್ಥಳದಲ್ಲಿ ಡ್ರಿಲ್ ಮಾಡಿ ವಾಲ್ ಪ್ಲಗ್ ಸೇರಿಸಿ.

ಸ್ಟ್ಯಾಂಡ್‌ಆಫ್ ಜೋಡಿಸಿ

ಪ್ರತಿ ಸ್ಟೇನ್‌ಲೆಸ್ ಸ್ಟೀಲ್ ಸ್ಟ್ಯಾಂಡ್‌ಆಫ್‌ನ ಬೇಸ್ ಅನ್ನು ಗೋಡೆಗೆ ಬಿಗಿಗೊಳಿಸಿ.

ಫಲಕ ಕೂರಿಸಿ

ಫಲಕವನ್ನು ಸ್ಟ್ಯಾಂಡ್‌ಆಫ್ ಮೇಲೆ ಕೂರಿಸಿ ಕ್ಯಾಪ್‌ಗಳನ್ನು ಕೈಯಿಂದ ಬಿಗಿಗೊಳಿಸಿ. ಹೆಚ್ಚು ಬಿಗಿ ಮಾಡಬೇಡಿ — ಅಕ್ರಿಲಿಕ್‌ನಲ್ಲಿ ಬಿರುಕು ಬರಬಹುದು.

ಸ್ಟ್ಯಾಂಡ್‌ಆಫ್‌ಗಳು ಫಲಕವನ್ನು ಗೋಡೆಯಿಂದ ಕೆಲವು ಮಿಲಿಮೀಟರ್ ದೂರದಲ್ಲಿ ಹಿಡಿದಿಡುತ್ತವೆ, ಇದರಿಂದ ಮಳೆ ನೀರು ಫಲಕದ ಹಿಂದೆ ನಿಲ್ಲದೆ ಹರಿದುಹೋಗುತ್ತದೆ. ಹೊರಾಂಗಣದಲ್ಲಿ ಟೇಪ್‌ಗಿಂತ ಸ್ಟಡ್ ಮೌಂಟಿಂಗ್ ಹೆಚ್ಚು ಕಾಲ ಬಾಳಿಕೆ ಬರುವುದು ಇದೇ ಕಾರಣಕ್ಕೆ.

3M ಟೇಪ್ ಬಳಸುವಾಗ

ನಯವಾದ ಒಳಾಂಗಣ ಬಾಗಿಲು ಮತ್ತು ಸಣ್ಣ ಫಲಕಗಳಿಗೆ ಮಾತ್ರ ಸೂಕ್ತ.

  • ಮೇಲ್ಮೈಯನ್ನು ಐಸೊಪ್ರೊಪೈಲ್ ಆಲ್ಕೋಹಾಲ್‌ನಿಂದ ಸ್ವಚ್ಛಗೊಳಿಸಿ ಸಂಪೂರ್ಣ ಒಣಗಲು ಬಿಡಿ. ಧೂಳು ಅಥವಾ ಎಣ್ಣೆ ಇದ್ದರೆ ಟೇಪ್ ಹಿಡಿಯುವುದಿಲ್ಲ.
  • ಮೊದಲು ಡ್ರೈ-ಫಿಟ್ ಮಾಡಿ ಮೇಲಿನ ಎರಡು ಮೂಲೆಗಳನ್ನು ಮಾಸ್ಕಿಂಗ್ ಟೇಪ್‌ನಿಂದ ಗುರುತಿಸಿ.
  • ಲೈನರ್ ತೆಗೆದು ಎಚ್ಚರಿಕೆಯಿಂದ ಇರಿಸಿ — ಅಂಟು ತಕ್ಷಣ ಹಿಡಿಯುತ್ತದೆ, ಮತ್ತೆ ಸರಿಸಲು ಆಗುವುದಿಲ್ಲ.
  • ಫಲಕದ ಎಲ್ಲ ಭಾಗದ ಮೇಲೆ 30 ಸೆಕೆಂಡ್ ಗಟ್ಟಿಯಾಗಿ ಒತ್ತಿ.
  • 24 ಗಂಟೆ ಮುಟ್ಟದೆ ಬಿಡಿ.

ಗಮನಿಸಿ: ಒರಟಾದ, ತೇವವಾದ, ಪುಡಿಯಾದ ಅಥವಾ ಹೊಸದಾಗಿ ಬಣ್ಣ ಹಚ್ಚಿದ ಗೋಡೆಗೆ ಮತ್ತು ಯಾವುದೇ ಹೊರಾಂಗಣ ಫಲಕಕ್ಕೆ ಟೇಪ್ ಬಳಸಬೇಡಿ.

ಸಾಮಾನ್ಯ ಪ್ರಶ್ನೆಗಳು

ಕನ್ನಡ ನೇಮ್ ಪ್ಲೇಟ್ ಕುರಿತು FAQ

ಕನ್ನಡ ನೇಮ್ ಪ್ಲೇಟ್ ಬೆಲೆ ಎಷ್ಟು?
ಕನ್ನಡ ಹೆಸರು ಫಲಕದ ಬೆಲೆ ₹1,499 ರಿಂದ ಆರಂಭವಾಗುತ್ತದೆ. ಅಕ್ರಿಲಿಕ್ ಡೋರ್ ಪ್ಲೇಟ್ ₹1,499–₹2,900, ವಾಲ್ನಟ್ ACP ಹೌಸ್ ನೇಮ್ ಬೋರ್ಡ್ ₹3,300 ರಿಂದ, ದೊಡ್ಡ ಕುಟುಂಬ ಫಲಕ ₹3,790. ಅಂತಿಮ ಬೆಲೆ ಅಳತೆ, ವಸ್ತು ಮತ್ತು ಲೇಯರ್ ಸಂಖ್ಯೆಯ ಮೇಲೆ ಅವಲಂಬಿಸಿದೆ. ಭಾರತದೆಲ್ಲೆಡೆ ಉಚಿತ ವಿತರಣೆ.
ಫಲಕವನ್ನು ಸಂಪೂರ್ಣ ಕನ್ನಡದಲ್ಲೇ ಮಾಡಬಹುದೇ?
ಹೌದು. ಸಂಪೂರ್ಣ ಕನ್ನಡದಲ್ಲಿ ಅಥವಾ ಕನ್ನಡ + English bilingual ವಿನ್ಯಾಸದಲ್ಲಿ ಮಾಡಬಹುದು. ಹೆಸರು, ಮನೆ ಸಂಖ್ಯೆ ಮತ್ತು ಉಪಶೀರ್ಷಿಕೆಯ ಕ್ರಮವನ್ನು ನೀವು ಆಯ್ಕೆ ಮಾಡಬಹುದು.
ಎಷ್ಟು ಕನ್ನಡ ಫಾಂಟ್ ಆಯ್ಕೆಗಳಿವೆ?
10 ಪ್ರತ್ಯೇಕ ಕನ್ನಡ ಫಾಂಟ್ ಕುಟುಂಬಗಳು ಲಭ್ಯ — Noto Sans Kannada, Noto Serif Kannada, Anek Kannada, Baloo Tamma 2, Hubballi, Hind Mysuru, Tiro Kannada, Akaya Kanadaka, Benne ಮತ್ತು Padyakke Expanded One. ದಪ್ಪ ಮತ್ತು ಅಗಲ ಬದಲಾವಣೆಗಳೊಂದಿಗೆ 20+ ಶೈಲಿಗಳಾಗುತ್ತವೆ.
ಶ್ರೀ ರಾಘವೇಂದ್ರ ಸ್ವಾಮಿ ಚಿಹ್ನೆ ಇರುವ ಫಲಕ ಸಿಗುತ್ತದೆಯೇ?
ಹೌದು. ರಾಘವೇಂದ್ರ ಫಲಕ ಮೂರು ಆಯ್ಕೆಗಳಲ್ಲಿ ಲಭ್ಯ — ₹1,550 ರಿಂದ 12 × 18 ಇಂಚು ಬ್ರಷ್ಡ್ ಗೋಲ್ಡ್ ಅಥವಾ ಸಿಲ್ವರ್ ಲೇಸರ್ ಕೆತ್ತನೆ, ₹2,590 ಶ್ರೀ ಗುರು ಕೃಪಾ ಮಿರರ್-ಗೋಲ್ಡ್ ವಿನ್ಯಾಸ, ಮತ್ತು ₹4,700 ರಿಂದ ಪ್ರೀಮಿಯಂ 4 ಮಿಮೀ ಮ್ಯಾಟ್ ಕಪ್ಪು ಬೇಸ್ ಮೇಲೆ 3 ಮಿಮೀ ಎತ್ತರಿಸಿದ ಗೋಲ್ಡ್ ಮಿರರ್ (12 × 20 ಅಥವಾ 15 × 24 ಇಂಚು). ₹2,590 ಮತ್ತು ₹4,700 ಮಾದರಿಗಳಲ್ಲಿ ಮಿರರ್-ಗೋಲ್ಡ್ ಅಕ್ರಿಲಿಕ್ ರಾಘವೇಂದ್ರ ಚಿಹ್ನೆ ಮತ್ತು ನಿಮ್ಮ ಕನ್ನಡ ಮನೆ ಹೆಸರು ಸೇರಿಸಲಾಗುತ್ತದೆ. ಗಣೇಶ, ಲಕ್ಷ್ಮಿ, ವೆಂಕಟೇಶ ಮತ್ತು ಓಂ ಚಿಹ್ನೆಗಳೂ ಲಭ್ಯ.
ಕನ್ನಡ ಕಾಗುಣಿತ ಸರಿಯಾಗಿದೆಯೇ ಎಂದು ಹೇಗೆ ಖಚಿತಪಡಿಸಿಕೊಳ್ಳುವುದು?
ನೀವು ಕಳುಹಿಸಿದ exact text ಆಧಾರವಾಗಿ ಡಿಜಿಟಲ್ ಪ್ರಿವ್ಯೂ ನೀಡುತ್ತೇವೆ. ತಯಾರಿಕೆಗೂ ಮೊದಲು ಪ್ರತಿಯೊಂದು ಅಕ್ಷರ, ಒತ್ತು ಮತ್ತು ಸಂಖ್ಯೆಯನ್ನು ಪರಿಶೀಲಿಸಿ ಅನುಮೋದಿಸಿ.
ಯಾವ ಅಳತೆ ಹೆಚ್ಚು ಸೂಕ್ತ?
ಅಪಾರ್ಟ್‌ಮೆಂಟ್ ಬಾಗಿಲಿಗೆ 6×12 ಅಥವಾ 8×16 ಇಂಚು ಸಾಮಾನ್ಯವಾಗಿ ಸೂಕ್ತ. ಎರಡು ಭಾಷೆ, ಉದ್ದವಾದ ಹೆಸರು ಅಥವಾ ಚಿಹ್ನೆಗಾಗಿ 10×16 ಇಂಚು. ಕಾಂಪೌಂಡ್ ಗೋಡೆ ಮತ್ತು ಗೇಟ್‌ಗೆ 12×20 ಇಂಚು ಅಥವಾ ದೊಡ್ಡದು.
ಗಣೇಶ, ಓಂ ಅಥವಾ ನವಿಲು ಚಿಹ್ನೆ ಸೇರಿಸಬಹುದೇ?
ಹೌದು. ವಿನ್ಯಾಸದ ಗಾತ್ರಕ್ಕೆ ತಕ್ಕಂತೆ ಗಣೇಶ, ಓಂ, ಸ್ವಸ್ತಿಕ್, ಲಕ್ಷ್ಮಿ, ರಾಘವೇಂದ್ರ, ನವಿಲು, ಹೂವಿನ ಅಲಂಕಾರ ಅಥವಾ ಸರಳ border ಸೇರಿಸಬಹುದು.
ಹೊರಾಂಗಣ ಗೇಟ್‌ಗೆ ಯಾವ ವಸ್ತು ಸೂಕ್ತ?
ಗೇಟ್ ಅಥವಾ ಹೊರಾಂಗಣ ಪ್ರವೇಶಕ್ಕೆ ACP ಬೇಸ್ ಉತ್ತಮ ಆಯ್ಕೆ. ಮಳೆ ಮತ್ತು ಸೂರ್ಯನ ನೇರ exposure ಇರುವ ಜಾಗದ ಚಿತ್ರವನ್ನು ಕಳುಹಿಸಿದರೆ ಸೂಕ್ತ material ಮತ್ತು mounting ಸಲಹೆ ನೀಡುತ್ತೇವೆ.
3M tape ಮತ್ತು stud mounting ಎರಡೂ ಸಿಗುತ್ತವೆಯೇ?
ವಿನ್ಯಾಸ ಮತ್ತು ಗಾತ್ರಕ್ಕೆ ಅನುಗುಣವಾಗಿ 3M tape ಅಥವಾ stud mounting ಆಯ್ಕೆ ಲಭ್ಯ. 3M tape smooth surface‌ಗೆ; rough wall ಮತ್ತು ದೊಡ್ಡ ಫಲಕಕ್ಕೆ stud/screw fixing ಸೂಕ್ತ.
ಬೆಂಗಳೂರು ಮತ್ತು ಮಂಗಳೂರಿಗೆ ವಿತರಣೆ ಇದೆಯೇ?
ಹೌದು. ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಹಾಗೂ ಭಾರತದೆಲ್ಲೆಡೆ ಉಚಿತವಾಗಿ ಕಳುಹಿಸುತ್ತೇವೆ. ಸಾಮಾನ್ಯವಾಗಿ ವಿನ್ಯಾಸ ಅನುಮೋದನೆಯ ನಂತರ 5–8 ದಿನಗಳಲ್ಲಿ ತಲುಪುತ್ತದೆ.
ಆರ್ಡರ್ ಮಾಡುವ ಮೊದಲು ವಿನ್ಯಾಸ ನೋಡಬಹುದೇ?
ಹೌದು. ಹೆಸರು, ಅಳತೆ ಮತ್ತು ಬಣ್ಣ ಕಳುಹಿಸಿದ ಬಳಿಕ ಡಿಜಿಟಲ್ preview ನೀಡಲಾಗುತ್ತದೆ. ನಿಮ್ಮ approval ನಂತರವೇ production ಆರಂಭವಾಗುತ್ತದೆ.
ಅಕ್ರಿಲಿಕ್‌ನ ದಪ್ಪ ಎಷ್ಟು?
ಪ್ರಮಾಣಿತ ರಚನೆ — 3 ಮಿ.ಮೀ ಕಾಸ್ಟ್ ಅಕ್ರಿಲಿಕ್ ಬೇಸ್ ಮತ್ತು 2 ಮಿ.ಮೀ ಮಿರರ್ ಗೋಲ್ಡ್ ಅಥವಾ ಮಿರರ್ ಸಿಲ್ವರ್ ಅಕ್ರಿಲಿಕ್ ಉಬ್ಬು ಅಕ್ಷರಗಳು. ಬ್ರಷ್ಡ್ ಗೋಲ್ಡ್ ಮತ್ತು ಬ್ರಷ್ಡ್ ಸಿಲ್ವರ್ ವಿನ್ಯಾಸಗಳಲ್ಲಿ 1.5 ಮಿ.ಮೀ ಬ್ರಷ್ಡ್ ಫೇಸ್ 3 ಮಿ.ಮೀ ಕಪ್ಪು ಅಕ್ರಿಲಿಕ್ ಬೇಸ್ ಮೇಲೆ ಇರುತ್ತದೆ.
ಅಳವಡಿಕೆಗೆ ಬೇಕಾದ ಸಾಮಗ್ರಿ ಜೊತೆಗೆ ಬರುತ್ತದೆಯೇ?
ಹೌದು. ಸ್ಟಡ್ ಮೌಂಟಿಂಗ್ ಫಲಕಗಳ ಜೊತೆಗೆ ಡ್ರಿಲ್ಲಿಂಗ್ ಟೆಂಪ್ಲೇಟ್, ವಾಲ್ ಪ್ಲಗ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಸ್ಟ್ಯಾಂಡ್‌ಆಫ್ ಬರುತ್ತವೆ. ಟೇಪ್ ಮೌಂಟಿಂಗ್ ಫಲಕಗಳಲ್ಲಿ 3M ಅಂಟು ಮೊದಲೇ ಹಚ್ಚಲಾಗಿರುತ್ತದೆ. ಡ್ರಿಲ್ ಮಾತ್ರ ನೀವು ಒದಗಿಸಬೇಕು.
ಒರಟಾದ ಕಾಂಪೌಂಡ್ ಗೋಡೆಗೆ ಅಳವಡಿಸಬಹುದೇ?
ಹೌದು, ಆದರೆ ಸ್ಟಡ್ ಮೌಂಟಿಂಗ್ ಮೂಲಕ ಮಾತ್ರ. ಒರಟಾದ, ತೇವವಾದ ಅಥವಾ ಪುಡಿಯಾದ ಗೋಡೆಯ ಮೇಲೆ ಅಂಟು ಟೇಪ್ ಹಿಡಿಯುವುದಿಲ್ಲ. ಗೋಡೆಯ ಚಿತ್ರವನ್ನು WhatsApp‌ನಲ್ಲಿ ಕಳುಹಿಸಿದರೆ ತಯಾರಿಕೆಗೂ ಮೊದಲು ಸೂಕ್ತ ವಿಧಾನವನ್ನು ಖಚಿತಪಡಿಸುತ್ತೇವೆ.

ನಿಮ್ಮ ಕನ್ನಡ ಹೆಸರು ಫಲಕಕ್ಕೆ ಉಚಿತ ಡಿಸೈನ್ ಮಾಕ್‌ಅಪ್ ಪಡೆಯಿರಿ

ಮನೆಯ ಬಾಗಿಲಿನ ಚಿತ್ರ, ಬೇಕಾದ ಕನ್ನಡ ಹೆಸರು, ಅಳತೆ ಮತ್ತು ಇಷ್ಟವಾದ ಬಣ್ಣವನ್ನು ಕಳುಹಿಸಿ. ನಿಮ್ಮ ಸ್ಥಳಕ್ಕೆ ಹೊಂದುವ ವಿನ್ಯಾಸ ಮತ್ತು 2–3 ಫಾಂಟ್ ಆಯ್ಕೆಗಳನ್ನು ಉಚಿತವಾಗಿ ತೋರಿಸುತ್ತೇವೆ.

Free Design Mockup